¡Sorpréndeme!

Bigg Boss Kannada Season 5 : ರಿಯಾಜ್ ಮೇಲೆ ಉಗ್ರ ಪ್ರತಾಪ ತೋರಿದ ಜಗನ್ ಚಂದ್ರು | FIlmibeat Kannada

2017-11-10 3,515 Dailymotion

ಸರಿ-ತಪ್ಪು ನೋಡದೆ ರಿಯಾಝ್ ಮೇಲೆ ಉಗ್ರ ಪ್ರತಾಪ ತೋರಿದ ಜಗನ್, ಚಂದ್ರು.! 'ಅದೃಷ್ಟ'ದಿಂದ ರಿಯಾಝ್ ಈ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿದ್ದು ಕೆಲವರಿಗೆ ಇಷ್ಟ ಆಗಿಲ್ಲ ಅಂತ ಕಾಣುತ್ತೆ. ಹೀಗಾಗಿ, ಅತ್ತ ಅಡುಗೆ ಮನೆ ಡಿಪಾರ್ಟ್ಮೆಂಟ್ ಬಗ್ಗೆ ಅನುಪಮಾ ಗೌಡ, ಕೃಷಿ, ಆಶಿತಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇತ್ತ ಕ್ಯಾಪ್ಟನ್ ಮಾತನ್ನ ಕೇಳುವ ತಾಳ್ಮೆ ಕೆಲವರಿಗೆ ಇಲ್ಲವೇ ಇಲ್ಲ.! ಅಡುಗೆ ವಿಚಾರಕ್ಕೆ ಕ್ಯಾಪ್ಟನ್ ರಿಯಾಝ್ ಹಾಗೂ ಸಮೀರಾಚಾರ್ಯ, ಚಂದನ್ ಶೆಟ್ಟಿ ಮಾತನಾಡಿಕೊಳ್ಳುತ್ತಿರುವಾಗ, ಮಧ್ಯೆ ಬಾಯಿ ಹಾಕಿ ರಂಪ ಮಾಡಿದ್ದು ಜಗನ್ನಾಥ್.! ನಂತರ 'ಜ್ಯೂಸ್ ಬೇಕು..' ಟಾಸ್ಕ್ ನಲ್ಲಿ ನಿರ್ಧಾರಕ್ಕೆ ಬರುವ ಮೊದಲು ಮಾನದಂಡಗಳ ಬಗ್ಗೆ ಚರ್ಚೆ ಮಾಡಲು ರಿಯಾಝ್ ಮುಂದಾದಾಗಲೂ, ಅಸಡ್ಡೆ ತೋರಿದ ಜಗನ್ ನಂತರ ಮಹಾ ಯುದ್ಧಕ್ಕೆ ನಾಂದಿ ಹಾಡಿದರು. ಸರಿ-ತಪ್ಪು ಲೆಕ್ಕ ಹಾಕದೆ ರಿಯಾಝ್ ಮೇಲೆ ಜಗನ್ನಾಥ್ ಹಾಗೂ ಸಿಹಿ ಕಹಿ ಚಂದ್ರು ಉಗ್ರ ಪ್ರತಾಪ ತೋರಿದರು.